ಆನಂದ ಬಳಗ ಯುವ ವಿಭಾಗವು ನವೆಂಬರ್ ಐದು ೨೦೧೭ ರಂದು ಶಿವಾಜಿನಗರದ ಫ್ರಿಡ್ಜ್ ಹೌಸ್ ನಲ್ಲಿ ನಮ್ಮ ಬಳಗದ ಸದಸ್ಯರಿಗಾಗಿ ಸಾರ್ವಜನಿಕ ಭಾಷಣ ಕಾರ್ಯಾಗಾರವನ್ನು ಏರ್ಪಡಿಸಿತ್ತು. ಬೆಳಗ್ಗೆ ೧೦ ರಿಂದ ಸಾಯಂಕಾಲ ೫:೦೦ ರ ತನಕ ಈ ಕಾರ್ಯಾಗಾರವು ನಡೆಯಿತು. .
ಹತ್ತು ಮಹಿಳಾ ಸದಸ್ಯರು ಹಾಗು ಹದಿನಾಲಕ್ಕು ಪುರುಷರು ಇದರಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದಿರುತ್ತಾರೆ.
ಕುಮಾರಿ ಮೇಘನ ಭಟ್ ರವರ ಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.
ಯುವ ವಿಭಾಗದ ಸಂಚಾಲಕರಾದ ಶ್ರೀ ದಿನೇಶ್ ರಾಯರು ಮುಖ್ಯ ಅತಿಥಿಗಳಾಗಿ ಬಂದ ಟೋಸ್ಟ್ ಮಾಸ್ಟರ್ ಕ್ಲಬ್ ನ ಅಧ್ಯಕ್ಷರಾದ ಶ್ರೀಯುತ ವಿ.ಎಸ್.ವಿ. ಪ್ರಸಾದ್ ರವರನ್ನು ಸಭೆಗೆ ಪರಿಚಯಿಸಿ ಹೂ ಗುಚ್ಛ ನೀಡಿ ಸ್ವಾಗತಿಸಿದರು. ಹಾಗೆಯೇ ಕಾರ್ಯಾಗಾರದ ವಿಶ್ವಾಸನೀಯ ಸಲಹೆಗಾರರಾದ ಶ್ರೀಮತಿ ಡಾಕ್ಟರ್ ವೀಣಾ ಶರತ್, ಶ್ರೀ ಕೆ.ಎನ್. ಅಡಿಗ, ಶ್ರೀ ಎಂ.ಕೆ ಪ್ರಸಾದ್,
ಶ್ರೀ ಸತ್ಯನಾರಾಯಣ ಭಟ್, ಶ್ರೀ ಶರತ್ ಚಂದ್ರ್ರ, ಶ್ರೀ ಮಧುಸೂದನ ಕಾವೂರು, ಶ್ರೀ ರಮೇಶ್ ಭಟ್. ಅವರನ್ನು ಸಭೆಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಸೇರಿದ ಎಲ್ಲಾರಿಗೂ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರುಗಳನ್ನು ಸ್ವಾಗತಿಸಿ ಬರ ಮಾಡಿಕೊಂಡರು.
ಶ್ರೀಮತಿ ಅಮಿತಾ ರಾವ್ ಹಾಗು ಶ್ರೀಮತಿ ಚಂದ್ರಿಕಾ ರಾಜೇಶ್ ರವರು ಬಹಳ ಮುತುವರ್ಜಿಯಿಂದ ಆಗಮಿಸಿದ ಸದಸ್ಯರೆಲ್ಲರ ಹೆಸರನ್ನು ನೊಂದಾಯಿಸಿಕೊಂಡು ಕಾರ್ಯಕ್ರಮದ ಸಲಹೆ ಸೂಚನೆಗಳನಿತ್ತರು.
ಶ್ರೀ ವಿ. ಎಸ. ವಿ. ಪ್ರಸಾದ್ ರವರು ಸಾರ್ವಜನಿಕವಾಗಿ ಯಾವುದೇ ವಿಷಯಗಳನ್ನು ಕೊಟ್ಟರೂ, ಸೇರಿದ ಸಭಿಕರನ್ನು ಆಕರ್ಷಿಸುತ್ತಾ ಹೇಗೆ ಭಾಷಣ ಮಾಡ ಬೇಕೆಂದು, ಯಾವುದೇ ಅಳಕು ಇಲ್ಲದೆ ಹೇಗೆ ಮಾತಾಡ ಬೇಕೆಂದು ತಿಳಿಸಿದರು.
ಪ್ರಪ್ರಥಮವಾಗಿ ಡಾಕ್ಟರ್ ವೀಣಾ ಶರತ್ ರವರು ಕಾರ್ಯಾಗಾರದ ಅಭ್ಯರ್ಥಿಗಳಿಗೆ “ಐಸ್ ಬ್ರೇಕರ್” ಅಂದರೆ ತಮ್ಮನ್ನು ಸಭೆಗೆ ಯಾವ ರೀತಿ ಪರಿಚಯಿಸಿ ಕೊಳ್ಳ ಬೇಕು ಅದರಲ್ಲೂ ಏನೆಲ್ಲ ವಿಷಯಗಳನ್ನು ನಾವು ಸೇರಿದ ಜನ ಸ್ತೋಮಕ್ಕೆ ನಮ್ಮ ಬಗ್ಗೆ ತಿಳಿಸಬಹುದು ಎಂದು ಹೇಳಿ ಕೊಟ್ಟರು.
ಶ್ರೀ ಎಂ. ಕೆ. ಪ್ರಸಾದ್ ರವರು ತಮ್ಮ ವಾಕ್ಚತುರ್ಯದಲ್ಲಿ ಕಾರ್ಯಕ್ರಮದ ಉದ್ದೇಶ, ಸಾರ್ವಜನಿಕ ಸ್ಥಳಗಲ್ಲಿ ತಾವು ವೇದಿಕೆಯಲ್ಲಿ ಯಾವ ರೀತಿ ತಮ್ಮನ್ನು ತಾವೇ ಪರಿಚಯಿಸಿ ಕೊಳ್ಳುವ ವಿಧಾನ ತಿಳಿಸಿ ಹೇಳಿದರು.
ಅದರಂತೆ ಭಾಗವಹಿಸಿದವರಲ್ಲಿ ಕೆಲವರಂತು ಮೊಟ್ಟ ಮೊದಲಬಾರಿಗೆ ತಮ್ಮ ಜೀವನದಲ್ಲಿ ವೇದಿಕೆಗೆ ಬಂದು ಮಾತಾಡಿರುತ್ತಾರೆ. ಇದು ಅವರ ಮೊದಲ ಪರೀಕ್ಷೆಯಾದುದರಿಂದ ಸ್ವಲ್ಪ ಮನದಾಳದಲ್ಲಿ ಹೆದರಿಕೊಂಡಂತೆ ಕಾಣಿಸುತ್ತಿತ್ತು.
ಹಲವಾರು ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆ. ಎನ್.ಅಡಿಗರು ಭಾಗವಹಿಸಿದ ಸದಸ್ಯರಿಗೆ ಎರಡನೇ ಅಧ್ಯಾಯ ವನ್ನು ತಿಳಿಸಿದರು. ಇಲ್ಲಿ ತಾವು ಯಾವ ವಿಷಯದಲ್ಲಿ ಸಭೆಯನ್ನು ಉದ್ದೇಶಿಸಿ ಮಾತಾಡಬೇಕು,ಅದಕ್ಕೆ ಬೇಕಾಗಿರುವ ತಯಾರಿ ಹಾಗು ಭಾಷಣ ವನ್ನು ಪ್ರಾರಂಭಿಸಿ ಮುಕ್ತಾಯ ಮಾಡುವ ರೀತಿಯ ಬಗ್ಗೆ ವಿವರವಾಗಿ ತಿಳಿಸಿದರು.
ಸತ್ಯನಾರಾಯಣ ಭಟ್ ರವರು ಒಂದು ವಿಷಯದ ಬಗ್ಗೆ ಅಡಿಗರು ತಿಳಿಸಿದಂತೆ ಯಾವ ರೀತಿ ಮಾತಾಡ ಬಹುದೆಂದು ತೋರಿಸಿಕೊಟ್ಟರು..
ಇಲ್ಲಿ ಆರು ಸಲಹೆಗಾರರಿಗೂ ೪ ಸದಸ್ಯರಂತೆ ನೀಡಲಾಗಿ ಅವರು ಭಾಗವಹಿಸಿದ ಸದಸ್ಯರಿಗೆ ಸಲಹೆ ಸೂಚನೆಗಳನ್ನು ಅರ್ಧತಾಸುಗಳಲ್ಲಿ ವಿವರಿಸಿ ಎಲ್ಲರನ್ನು ಸಭಿಕರ ಮುಂದೆ ವೇದಿಕೆಗೆ ಬಂದು ತಾವುಗಳು ತಯಾರಿಸಿದ ವಿಷಯಗಳ ಬಗ್ಗೆ ಮಾತನಾಡಲು ಅನುವು ಮಾಡಿಕೊಡಲಾಯಿತು.
ಮುಖ್ಯ ಅತಿಥಿಗಳು ನಮ್ಮ ಸದಸ್ಯರ ಮಾತುಗಾರಿಕೆಯನ್ನು ನೋಡಿ ಬಹಳ ಸಂತೋಷದಿಂದ ಯಾವುದೇ ಅಳಕಿಲ್ಲದೆ ಮಾತಾಡಿ ಎಲ್ಲರ ಮನಗೆದ್ದ ವಿಷಯವನ್ನು ತಿಳಿಸಿದರು.
ಕಡೆಯದಾಗಿ ಶ್ರೀ ಶರತ್ ಚಂದ್ರರವರು ಸದಸ್ಯರುಗಳನ್ನು ಭಾಗವಹಿಸಿದ ಎಲ್ಲರಿಗೂ ಒಂದೊಂದು ವಿಷಯಗಳನ್ನು ಕೊಟ್ಟು ಅದರ ಬಗ್ಗೆ ಮಾತಾಡುವಂತೆ ಹೇಳಿದರು.
ಈ ಮೂರನೆಯ ಪಾಠವು ನಮ್ಮ ಸ್ಪರ್ಧಿಗಳಿಗೆ ವೇದಿಕೆಯಲ್ಲಿ ಯಾವುದೇ ಅಳುಕಿಲ್ಲದೆ ಸಾರಸಾಗಾಟವಾಗಿ ನಗುನಗುತ್ತಾ ಹೇಗೆ ಸಭಿಕರನ್ನು ಎದುರಿಸ ಬಹುದೆಂದು ಮಾಡಿ ತೋರಿಸಿದರು. ಹಾಗು ಎಲ್ಲ ನೆರೆದ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ಶ್ರೀ ದಿನೇಶ್ ರಾಯರು ಎಲ್ಲರಿಗೂ ವಂದನಾರ್ಪಣೆಯನ್ನು ಹೇಳಿದರು.
ಫ್ರಿಡ್ಜ್ ಹೌಸ್ ನ ಮಾಲೀಕರಾದ ಶ್ರೀ ಎಂ. ಕೆ ಪ್ರಸಾದ್ ರವರು ಉಚಿತವಾಗಿ ಸಭೆ ನಡೆಸಲು ಅವರ ಸ್ಥಳದಲ್ಲಿ ಅನುವು ಮಾಡಿಕೊಟ್ಟರು.
ಶ್ರೀ ಎಂ.ಮೋಹನ್ ರಾಯರು ಮದ್ಯಾಹ್ನದ ಊಟವನ್ನು ಹಾಗೂ ಬೆಳಗ್ಗಿನ ಮತ್ತು ಸಾಯಂಕಾಲದ ಚಾ,ಕಾಫಿ ,ಬಿಸ್ಕತ್ ಗಳನ್ನು
ಶ್ರೀ ಬಾಲಚಂದ್ರ ತೋಳ್ಪಡಿ ಹಾಗೂ ಸಂದೀಪ್ ರಾವ್ ನೀಡಿದರು.
ಧ್ವನಿವರ್ಧಕ ಮತ್ತು ಆಸನಗಳ ವ್ಯವಸ್ಥೆಯನ್ನು ಶ್ರೀ ದಿನೇಶ್ ರಾವ್ ರವರು ನೋಡಿಕೊಂಡರು.
ಕಾರ್ಯಕ್ರಮವು ಮುಗಿದ ನಂತರ ಎಲ್ಲರ ಮುಖದಲ್ಲೂ ಹರುಷದ ಹೊನಲು ಹಾಗು ಮುಂದೆ ಯಾವುದೇ ಕಾರ್ಯಕ್ರಮಗಳನ್ನು ವೇದಿಕೆಗೆ ಬಂದು ನಾವು ಸಭಿಕರನ್ನು ಎದುರಿಸ ಬಹುದು ಎನ್ನುವ ಧೈರ್ಯದ ಮಾತುಗಳನ್ನು ಅಭ್ಯರ್ಥಿಗಳು ಹೇಳಿದರು ಹಾಗು ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ಸದಸ್ಯರೆಲ್ಲರೂ ಮಾಡುವಂತೆ ಉತ್ತೇಜಿಸಿದರು. ಕಾರ್ಯಕ್ರಮ ಮಾಡಿದ ಯುವ ವಿಭಾಗದ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿದರು.