ಸಹೃದಯ ಸಜ್ಜನ ಬಂಧುಗಳೇ,
ಆನಂದ ಬಳಗದ ಸಭಾಗ್ರಹ ದಲ್ಲಿ ನಿನ್ನೆಯ ದಿನ ಅತ್ಯಂತ ಯಶಸ್ವಿಯಾಗಿ ನಡೆದಿದ್ದ ಶ್ರೀ ದುರ್ಗಾ ದೀಪ ನಮಸ್ಕಾರ ಪೂಜೆಗೆ ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ ಪುನೀತರಾದ ತಮಗೆಲ್ಲರಿಗೂ ಆನಂದ ಬಳಗದ ಕಾರ್ಯಕಾರಿ ಸಮಿತಿಯ ವತಿಯಿಂದ ಕೃತಜ್ಞತಾಪೂರ್ವಕ ಧನ್ಯವಾದಗಳು.
ಶ್ರೀ ದುರ್ಗಾ ಮಾತೆಯು ಎಲ್ಲರನ್ನೂ ನಿರಂತರವಾಗಿ ರಕ್ಷಿಸುತ್ತಿರಲಿ ಎಂಬುದಾಗಿ ಈ ಮೂಲಕ ಆಶಿಸುತ್ತೇವೆ.
ನಿನ್ನೆಯ ಪೂಜಾ ಕಾರ್ಯಕ್ರಮ ನಮ್ಮ ನಿರೀಕ್ಷೆಗೆ ಮೀರಿ ಯಶಸ್ವಿಯಾಗಲು ಕಾರಣರಾದ ಆನಂದ ಬಳಗದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಮಾತ್ರವಲ್ಲದೆ ಅಪಾರೋಕ್ಷವಾಗಿ ಸಹಕರಿಸಿದ ಎಲ್ಲಾ ನೆಚ್ಚಿನ ಬಂಧುಗಳಿಗೆ ನಾನು ವೈಯಕ್ತಿಕವಾಗಿ ಧನ್ಯವಾದಗಳು ಅರ್ಪಿಸುತ್ತೇನೆ.🙏🙏
ಇಂತಿ,
ಟಿ ಎಸ್ ನಾಗರಾಜ ಉಪಾಧ್ಯಾಯ,
ಸಂಚಾಲಕರು,
ಧಾರ್ಮಿಕ ವಿಭಾಗ,
ಆನಂದ ಬಳಗ (ರಿ )