ಗಣೇಶೋತ್ಸವ

ಭಾವೈಕ್ಯತೆಯ ಉದ್ದೇಶವಾಗಿರಿಸಿಕೊಂಡು ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಆಚರಣೆಗೆ ಬಂದ ಗಣೇಶ ಹಬ್ಬ ಅಂದರೆ ಎಲ್ಲರಿಗೂ ಸಂಭ್ರಮ. ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವಜನಿಕರನ್ನು ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಅವರ ಕರೆಗೆ ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಸ್ಪಂದಿಸುತ್ತಾರೆ.

ದೇಶಾದ್ಯಂತ ಗಣೇಶ ಉತ್ಸವವನ್ನು ಬಹಳ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಲ್ಲೂ ಉದ್ಯಾನ ನಗರಿ ಬೆಂಗಳೂರಿನಲ್ಲಿ ಆನಂದ ಬಳಗ ಯುವ ವಿಭಾಗದ ವತಿಯಿಂದ ನಡೆಸಿಕೊಂಡು ಬರುವ ಗಣೇಶೋತ್ಸವಕ್ಕೆ ಅದರದೇ ಆದ ವಿಶಿಷ್ಟ ವೈಭವವಿದೆ. ಆದರೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕರೋನಾವೈರಸ್ ಎಂಬ ಮಹಾಮಾರಿಯ ಪರಿಣಾಮ ಈ ವರ್ಷದ ಗಣೇಶೋತ್ಸವದ ಮೇಲೂ ಕರಿನೆರಳು ಬೀರಿದೆ.

ಈ ಹಿನ್ನೆಲೆಯಲ್ಲಿ ಆನಂದ ಬಳಗವು ಆಗಸ್ಟ್ 23 ರಂದು ಬಸವನಗುಡಿಯ ಪುತ್ತಿಗೆ ಮಠದಲ್ಲಿ ಗಣೇಶೋತ್ಸವವನ್ನು ಸರಳ ಮತ್ತು ಭಕ್ತಿಪೂರ್ವಕವಾಗಿ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ವಯ ಆಚರಿಸಬೇಕೆಂದು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಲಾಯಿತು.

ಅದರಂತೆ ಗಣೇಶೋತ್ಸವಕ್ಕೆ ಪಾಲ್ಗೊಳ್ಳಲು ಆನಂದ ಬಳಗದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕುಟುಂಬದವರಿಗೆ ಮಾತ್ರ ಅವಕಾಶ ಕಲ್ಪಿಸಿ ಗರಿಷ್ಠ 50 ಸದಸ್ಯರ ಉಪಸ್ಥಿತಿಯಲ್ಲಿ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಯಿತು.
ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಪ್ರಕಾರ ನಾಲ್ಕು ಅಡಿಗಿಂತಲೂ ಹೆಚ್ಚು ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿಲ್ಲದಿರುವುದರಿಂದ  ಸಾಕಷ್ಟು ಸಂಘಟನೆಗಳು ಎಲ್ಲೆಡೆ ಪುಟ್ಟ ಗಣಪನ ಮೂರ್ತಿಗಳನ್ನು ‍ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದವು. ಆನಂದ ಬಳಗವೂ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎರಡು ಅಡಿ ಗಣೇಶನ ಪ್ರತಿಷ್ಠಾಪನೆ ಮಾಡಿದ್ದು ಗಮನಾರ್ಹ.

ಬೆಳಿಗ್ಗೆ 9.೦೦ ಘಂಟೆಗೆ ಶುಚಿ ರುಚಿಯಾದ ಫಲಾಹಾರದೊಂದಿಗೆ ಆರಂಭವಾಗಿ ಪುರೋಹಿತರಾದ ವೇದಶ್ರಿ ವಿಷ್ಣುಮೂರ್ತಿ ಶರಳಾಯ ಅವರ ನೇತೃತ್ವದಲ್ಲಿ ಗೋವರ್ಧನ ಗಿರಿಧಾರಿ ಶ್ರೀಕೃಷ್ಣನ ಸಮ್ಮುಖದಲ್ಲಿ ಆನಂದ ಬಳಗ ಯುವ ವಿಭಾಗದ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಕುಂಜತ್ತಾಯ ದಂಪತಿಗಳು ಎಲ್ಲರ ಕ್ಷೆಯೋಭಿವೃದ್ದಿಗೆ ಪ್ರಾರ್ಥನೆ ಯನ್ನು ಸಲ್ಲಿಸಿ ಆರಂಭವಾದ ಗಣಹೋಮ ಸುಮಾರು ಘಂಟೆ 11.30 ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನವಾಯಿತು . ಬಳಗದ ಸದಸ್ಯರಿಂದ
ಗಣೇಶನಿಗೆ ಹೂವಿನ ಅಲಂಕಾರ , ಮಹಿಳೆಯರಿಂದ ಸುಂದರವಾದ ರಂಗೋಲೆ , ವಿಷ್ಣು ಸಹಸ್ರ ನಾಮ , ಭಜನೆ , ದೇವರನಾಮ ಎಲ್ಲವು ಭಕ್ತಿ , ಭಾವದ ಹಾಗೂ ಸೇವೆಯ ಪ್ರತೀಕವಾಗಿದ್ದವು. ಸುಮಾರು 12.30 ಘಂಟೆಗೆ ಗಣೇಶನಿಗೆ ಪೂಜೆ, ಮಹಾಮಂಗಳಾರತಿ ಚೆಂಡೆ ತಾಳ ಜಾಗಟೆಗಳೊಂದಿಗೆ ಸದೃಶವಾಗಿ ನೋಡಿದ ಕಣ್ಣುಗಳು ,ಮನಸು, ದೇಹ ಪಾವನವಾದವು.
ಸುಮಾರು 1.00 ಘಂಟೆಗೆ ಭೋಜನ. ನಂತರ ಗಣೇಶನ ವಿಸರ್ಜನೆ ಸಾಂಕೇತಿಕವಾಗಿ ಮಠದ ಆವರಣದಲ್ಲೇ ನಡೆಯಿತು.

 

ಬಾಲಚಂದ್ರ ತೋಳ್ಪಾಡಿ

Subscribe Newsletter

Get latest updates of News and Evens from Ananda Balaga