ಪೈಪೋಟಿಯ ಬ್ಯಾಡ್ಮಿಂಟನ್ ಲೀಗ್

ಆನಂದ ಬಳಗದ ಕ್ರೀಡಾವಿಭಾಗ ಮತ್ತು ಯುವ ವಿಭಾಗದ ನೇತೃತ್ವದಲ್ಲಿ ನವೆಂಬರ್ ೧೯ ರಂದು ಆನಂದ ಬಳಗದ ಬ್ಯಾಡ್ಮಿಂಟನ್ ಲೀಗ್ ಅನೀಸ್ ಸ್ಪೋರ್ಟ್ಸ್ ಅಕಾಡೆಮಿ, ಇಟ್ಟಮಡು, ಹೊಸಕೆರೆಹಳ್ಳಿ, ಬನಶಂಕರಿ ಇಲ್ಲಿ ಅಚ್ಚುಕಟ್ಟಾಗಿ  ನೆರವೇರಿಸಲ್ಪಟ್ಟಿತು.

ಆನಂದ ಬಳಗದ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಒಟ್ಟು ೨೦ ಮಹಿಳೆಯರು ಮತ್ತು ೪೫ ಪುರುಷರು ಭಾಗವಹಿಸಿದರು. ಪುರುಷರ ವಿಭಾಗದಲ್ಲಿ ೧೪ ರಿಂದ ೩೫ ವರುಷದವರಿಗೆ ಒಂದು ಗುಂಪಾಗಿ ಹಾಗು ೩೫ರ ಮೇಲ್ಪಟ್ಟವರು ಇನ್ನೊಂದು ಗುಂಪಾಗಿ ಒಬ್ಬಂಟಿಯಾಗಿ ಹಾಗು ಜೋಡಿಯಾಗಿ ಪಂದ್ಯಗಳನ್ನಾಡಿಸಲಾಯಿತು.

ನೆರೆದಿರುವ ಎಲ್ಲ ಕಾರ್ಯಕರ್ತರಿಗೂ ಆಟಗಾರರಿಗೂ ಬೆಳಗಿನ ಚಾ ಕಾಫೀ ಹಾಗು ಉಪಹಾರವನ್ನು ನೀಡಿ ಆಟವಾಡಲು ಹುರುಪನ್ನು ಕೊಟ್ಟಂತಾಯಿತು.

ಬಳಗದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ಪಿ.ಯಸ್.  ಬಾಗಿಲ್ತಾಯ ಹಾಗು ದ್ವಾರಕಾ ಹೋಟೆಲಿನ ಶ್ರೀ ಶ್ರೀನಿವಾಸ ರಾವ್  ರವರು ಬ್ಯಾಡ್ಮಿಂಟನ್ ಲೀಗ್ ನ ಉದ್ಘಾಟನೆಯನ್ನು ಸರಿಯಾಗಿ ೯:೩೦ಕ್ಕೆ ಮಾಡಿದರು.

ತದ ನಂತರ ಅಕಾಡೆಮಿಯಾ ತಟಸ್ಥ ಅಂಪೈರ್ ಗಳನ್ನು ಶ್ರೀ  ಗುರುಮೂರ್ತಿ ಯವರು ಸ್ವಾಗತಿಸಿ ಅವರ ಜವಾಬ್ದಾರಿಯನ್ನು ಯಾವುದೇ ತೊಂದರೆಗಳಿಲ್ಲದೆ ನೆರೆವೇರಿಸಿ ಕೊಡಬೇಕೆಂದು ಕೇಳಿಕೊಂಡರು.

ಪ್ರಾರಂಭವಾದ ಆಟವನ್ನು ತುಂಬಿದ ಸದಸ್ಯರು ಆಟಗಾರರನ್ನು ಹರಿದುಂಬಿಸುತ್ತಾ ಪ್ರೋತ್ಸಾಹಿಸುತ್ತಾ ಹರ್ಷೋದ್ಘಾರ ಮಾಡುತ್ತಿದ್ದರೂ ಸ್ಪರ್ಧಿಗಳು ತಮ್ಮ ತಾಳ್ಮೆಯನ್ನು ಪ್ರದರ್ಶಿಸಿದರು. ಕಾರ್ಯಕರ್ತರು ಇನ್ನೊಂದು ಕಡೆಯಿಂದ ರುಚಿಯಾದ ಮಜ್ಜಿಗೆಯನ್ನು ನೀಡುತ್ತಾ ಬಾಯಾರಿಕೆಯನ್ನು ನೀಗಿಸುತಿದ್ದರು.

ಮಧ್ಯಾಹ್ನದ ಊಟದ ಸಮಯಕ್ಕೆ ರುಚಿರುಚಿಯಾದ ಊಟವನ್ನು ಎಲ್ಲರಿಗೂ ಬಡಿಸಿ ಹೊಟ್ಟೆ ತಣ್ಣಗಾಗಿಸಿದರು.

ಎಲ್ಲ ವಿಭಾಗಗಳಲ್ಲಿ ಬಹಳ ಚುರುಕಿನ ಸ್ಪರ್ಧೆಗಳು ನಡೆಯುತ್ತ ಪೈಪೋಟಿಯು ಬಹಳ ಜೋರಾಗಿತ್ತು. ಬಳಗದಲ್ಲಿ ಇಷ್ಟು ಒಳ್ಳೆಯ ಆಟಗಾರರಿದ್ದಾರೆಯೋ ಎಂದು ಸದಸ್ಯರೆಲ್ಲರೂ ಹುಬ್ಬೇರಿಸಿದರು.

ಕಾರ್ಯಕರ್ತರ ನೆರೆವಿನಿಂದ ಸುಸೂತ್ರವಾಗಿ ನೆಡೆದ ಈ ಪಂದ್ಯದಲ್ಲಿ ವಿಜೇತರಾದ ಸ್ಪರ್ದಿಗಳಿಗೆ ಶ್ರೀ ಪಿ.ಯಸ್.  ಬಾಗಿಲ್ತಾಯರು, ಶ್ರೀನಿವಾಸರಾಯರು ಹಾಗು ಕಾರ್ಯದರ್ಶಿಯವರಾದ ಶ್ರೀ ಹರಿದಾಸ ಉಪಾಧ್ಯರವರು ಬಹುಮಾನ ವಿತರಿಸಿದರು ವಿಶೇಷವಾಗಿ ಶ್ರೀ ಪಿ. ಯಸ್. ಬಾಗಿಲ್ತಾಯರು ವಿಜೇತರಿಗೆ ನಗದು ಬಹುಮಾನವನ್ನು ಕೊಡ ಮಾಡಿದರು.

ಮಹಿಳೆಯರ ವಿಭಾಗದಲ್ಲಿ ಶ್ರೀಮತಿ ಅರ್ಚನಾ ರಾವ್ ರವರು ಹಾಗು ಪುರುಷರ ವಿಭಾಗದಲ್ಲಿ ಶ್ರೀ ಶ್ರವಣ್ ಉಡುಪರವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡರು.

ಪ್ರತೀ ವಿಭಾಗದ ವಿಜೇತರುಗಳು ಹೆಸರು ಈ ಕೆಳಗಿನಂತೆ ಇದೆ

ಶ್ರೀ ಸಂದೀಪ್ ರಾವ್ ಅವರು ಅಂಪೈರುಗಳಿಗೆ, ಪ್ರಾರಂಭದಿಂದ ಪಂದ್ಯ ಮುಗಿಯುವ ವರೆಗೂ ಸದಸ್ಯರೊಂದಿಗೆ ಬೆರೆತರು.

ಶ್ರೀ ಪಿ .ಯಸ್. ಬಾಗಿಲ್ತಾಯ, ಶ್ರೀ ಶ್ರೀನಿವಾಸರಾಯರು, ಶ್ರೀ ಹರಿದಾಸ ಉಪಾಧ್ಯರವರಿಗೆಲ್ಲ ವಂದನಾರ್ಪಣೆಯನ್ನು ಹೇಳಿದರು. ನೆರೆದ ಆಟಗಾರರಿಗೂ, ಪ್ರೋತ್ಸಾಹಿಸಿದ ಎಲ್ಲ ಸದಸ್ಯರಿಗೂ ವಂದನೆ ಸಲ್ಲಿಸಲಾಯಿತು. ಅಕಾಡೆಮಿಯಾ ಆಡಳಿತ ವರ್ಗದವರನ್ನು ಹಾಗು ದ್ವನಿ ವರ್ಧಕದವರನ್ನು ನೆನೆದು ಕೊಂಡರು.

ತೀರ್ಪುಗಾರರಿಗೆಲ್ಲ ಸದಸ್ಯರಾದ ಗುರುಮೂರ್ತಿ, ದಿನೇಶ್ ರಾವ್, ಬಾಲಚಂದ್ರ ತೋಳ್ಪಡಿ, ಮಾಧವ ಉಪಾಧ್ಯ, ಗುರುರಾಜ, ಸಂದೀಪರವರು  ಟ್ರೋಫಿಯನ್ನು ನೀಡಿ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಪಂದ್ಯಗಳಿಗೆ ವಿಶೇಷವಾಗಿ ಬಳಗದ ಸದಸ್ಯರು  ಜಾಹಿರಾತುಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ, ಅವರುಗಳು

೧. ಶ್ರೀ ಪಿ.ಯಸ್. ಬಾಗಿಲ್ತಾಯ – ಹೋಟೆಲ್ ಅಜಂತಾ

೨. ಶ್ರೀ ಬಾ ರಾಮಚಂದ್ರ ಉಪಾಧ್ಯ – ಉಪಾಧ್ಯ ಮತ್ತು ಕಂಪನಿ

೩.  ಶ್ರೀ ಶ್ರೀನಿವಾಸ ರಾವ್ – ಹೋಟೆಲ್ ದ್ವಾರಕಾ

೪.  ಶ್ರೀ ಯಜ್ಞಾನಾರಾಯಣ ಭಟ್ – ಹೋಟೆಲ್ ಗಣೇಶ್ ಪ್ರಸಾದ್

೫. ಶ್ರೀ ಎಂ. ಕೆ. ಗುರುಮೂರ್ತಿ – ಜಿ. ಯಸ್.  ಪವರ್ ಸಿಸ್ಟಮ್ಸ್

೬.ಶ್ರೀ  ಗುರುರಾಜ ಪೇಜಾವರ – ಮೆಡಿಹಾಕ್ಸ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್

೭.ಶ್ರೀ ಸುಧೀರ್ ಕುಮಾರ್ -ಸುಜಯ್ ಇಂಡಸ್ಟ್ರೀಸ್

೮. ಶ್ರೀಮತಿ ಶೋಭಾ ರಾಧಾಕೃಷ್ಣ ಮತ್ತು ಶ್ರೀ ರಾಧಾಕೃಷ್ಣ

೯.ಶ್ರೀ ಮಾಧವ ಉಪಾಧ್ಯ – ಉಪಾಧ್ಯ & ಕಂಪನಿ

೧೦. ಶ್ರೀ ಸಂದೀಪ್ ರಾವ್

೧೧. ಶ್ರೀ ಬಾಲಚಂದ್ರ ತೋಳ್ಪಡಿ

೧೨. ಶ್ರೀ ದಿನೇಶ್ ರಾವ್ – ಕೃತಿ ಕನ್ಸಲ್ಟೆಂಟ್ಸ್ ಕನ್ಸೋರ್ಟಿಯಂ ಪ್ರೈವೇಟ್ ಲಿಮಿಟೆಡ್.

ಒಟ್ಟಾರೆಯಾಗಿ ಬ್ಯಾಡ್ಮಿಂಟನ್ ಲೀಗ್ ಬಹಳ ಚೆನ್ನಾಗಿ ಮೂಡಿ ಬಂತು ಹಾಗು ಸದಸ್ಯರುಗಳ ಮೆಚ್ಚುಗೆಗೆ ಪಾತ್ರವಾಯಿತು.

ವರದಿ

ಅಮಿತಾ ದಿನೇಶ್ ರಾವ್

Subscribe Newsletter

Get latest updates of News and Evens from Ananda Balaga