ಬಳಗ ಸಂಗೀತೋತ್ಸವ

ಆನಂದ ಬಳಗದ ಅಧಿಕೃತ ವಾಟ್ಸಾಪ್ ಗ್ರೂಪ್ ಸದಸ್ಯರು ಹಾಗೂ ಅವರ ಕುಟುಂಬದವರಿಗೆ ಯುವ ವಿಭಾಗದ ವತಿಯಿಂದ ದಿನಾಂಕ 12/09/2020 ರಿಂದ20/09/2020 ರ ವರೆಗೆ ಆಂತರ್ಜಾಲ ಮುಖಾಂತರ ಆಯೋಜಿಸಿದ ಗಾಯನ ಸ್ಪರ್ಧೆಯ ವಿವರ ತಮ್ಮ ಮುಂದೆ ಪ್ರಸ್ತುತಿ.

ಆಧುನಿಕ ಕಲೆಯಾದ ಚಲನಚಿತ್ರ ಗೀತೆಯ ಜೊತೆಗೆ ಜನಪದಗೀತೆ ಮತ್ತು ಭಾವಗೀತೆ ಗಾಯನದಂತಹ ಭಾರತೀಯ ಸಂಸ್ಕೃತಿಯ ಸ್ಪರ್ಧೆಯನ್ನು ಆಯೋಜಿಸಿ ಎಲ್ಲಾ ರೀತಿಯ ಕಲೆಗೆ ಪ್ರೋತ್ಸಾಹಿಸಿ ನಮ್ಮ ಯುವ ಸಮುದಾಯವನ್ನು ಜನಪದ ಸಂಸ್ಕೃತಿಯತ್ತ ಕೊಂಡೊಯ್ಯಲು ಪ್ರಯತ್ನ ಮಾಡುವುದು‌ ಹಾಗೂ ಯುವಜನರಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲು ಸಹಕಾರಿಯಾಗುವುದು, ಯುವಕರು ತಮ್ಮ ಬದುಕಿನ ಮೂಲಬೇರಾದ ಜನಪದ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡು ಸಾಹಿತ್ಯಾಭಿಮಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವುದು, ಭಾಗವಹಿಸುವವರ ಸೃಜನಶೀಲ ಸಾಮರ್ಥ್ಯದ ಬೆಳವಣಿಗೆಯನ್ನು ಉತ್ತೇಜಿಸುವುದು, ಸ್ಪರ್ಧೆಯಲ್ಲಿ ಭಾಗವಹಿಸುವವರ ಪ್ರದರ್ಶನ ಕೌಶಲ್ಯಗಳ ಸುಧಾರಣೆಗೆ ಸಹಕಾರಿಯಾಗುವುದು, ಬಳಗದ ಪ್ರತಿಭಾವಂತ ಯುವ ಗಾಯಕರನ್ನು ಗುರುತಿಸುವುದು ಹಾಗೂ ಅವರಿಗೆ ಆನಂದ ಮಿಲನ ವೇದಿಕೆಯಲ್ಲಿ ಹಾಡುವ ಅವಕಾಶ ಕಲ್ಪಿಸಿ ಸ್ವಯಂ ಅಭಿವ್ಯಕ್ತಿಗೆ ಅವಕಾಶಗಳನ್ನು ಒದಗಿಸುವುದು, ಇಂತಹ ಸ್ಪರ್ಧೆಗಳನ್ನು ಆಯೋಜಿಸಿ ಯುವಕರಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿ ಮೂಡಿಸಿ ಅದನ್ನು ಕಾರ್ಯಗತ ಗೊಳಿಸುವ ಮೂಲಕ ಯುವಕರ ವ್ಯಕ್ತಿತ್ವದ ಆಧ್ಯಾತ್ಮಿಕ ಸಂಸ್ಕೃತಿಯ ರಚನೆಗೆ ಕೊಡುಗೆ ನೀಡುವುದು‌ ಆನಂದ ಬಳಗದ ಯುವ ವಿಭಾಗದ ಉದ್ದೇಶ.

ಇಂತಹ ಉದ್ದೇಶವನ್ನು ಇಟ್ಟುಕೊಂಡು ಬಳಗದ ಯುವ ವಿಭಾಗದ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಕುಂಜತ್ತಾಯ ಮತ್ತು ಅವರ ತಂಡದವರು, ಸಾಂಸ್ಕೃತಿಕ ವಿಭಾಗದ ಸಂಚಾಲಕಿಯಾದ ಶ್ರೀಮತಿ ಶೋಭಾ ರಾಧಾಕೃಷ್ಣ ಮತ್ತು ತಂಡದವರ ಸಹಯೋಗದೊಂದಿಗೆ ಬಳಗದ ವಾಟ್ಸಾಪ್ ಗ್ರೂಪ್ ಸದಸ್ಯರಿಗೆ ಗಾಯನ ಸ್ಪರ್ಧೆ ಏರ್ಪಡಿಸುವುವ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಪ್ರಸ್ತಾಪಿಸಲಾಯಿತು. ಸಮಿತಿಯ ಪೂರ್ಣ ಒಪ್ಪಿಗೆ ಹಾಗೂ ಬೆಂಬಲದೊಂದಿಗೆ ಮುಂದಿನ ಕಾರ್ಯಸೂಚಿ ಬಗ್ಗೆ ಉಪ ಸಮಿತಿಯಲ್ಲಿ ಚರ್ಚಿಸಿ ಗಾಯನ ಸ್ಪರ್ಧೆಯನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಅದರಂತೆ ಸ್ಪರ್ಧೆಯ ನಿಯಮ ಮತ್ತು ನಿಭಂದನೆಗಳ ಕರಡನ್ನು ಸಮಿತಿಯಲ್ಲಿ ಮಂಡಿಸಿ ಸಮಿತಿಯ ಅನುಮೋದನೆಯೊಂದಿಗೆ ಆನಂದ ಬಳಗದ ಅಧಿಕೃತ 5 ವಾಟ್ಸಾಪ್ ಗ್ರೂಪ್ ಗಳಿಗೆ ಈ ಸ್ಪರ್ಧೆಯನ್ನು ಸಪ್ಟೆಂಬರ್ 12 ರಿಂದ 20ನೇ ತಾರೀಕಿನವರೆಗೆ ಆಯೋಜಿಸಲು ತೀರ್ಮಾನಿಸಲಾಯಿತು.

ಸ್ಪರ್ಧೆಯನ್ನು ದೇವರ ನಾಮ, ಭಾವಗೀತೆ ಹಾಗೂ ಚಲನ ಚಿತ್ರಗೀತೆ ಎಂದು 3 ವರ್ಗಗಳಾಗಿ ವಿಂಗಡಿಸಿ  ಸ್ಪರ್ಧೆಯ ನಿಯಮಾವಳಿಯಂತೆ 19 ವರ್ಷ ವಯೋಮಿತಿ ಮೇಲ್ಪಟ್ಟವರು ಯಾವುದೇ 2 ವಿಭಾಗದಲ್ಲಿ ಹಾಡಲು ಅವಕಾಶ ಕೊಡಲಾಯಿತು. ಸ್ಪರ್ಧಿಗಳು ತಮ್ಮ ಹಾಡನ್ನು ವಿಡಿಯೋ ಚಿತ್ರೀಕರಣ ಮಾಡಿ ಸಂಬಂಧ ಪಟ್ಟ ಗ್ರೂಪ್ ಸಂಯೋಜಕರಿಗೆ ಕಳುಹಿಸಬೇಕು. ಸಂಯೋಜಕರು ತಮಗೆ ಕಳುಹಿಸಿದ ವಿಡಿಯೋವನ್ನು ಎಲ್ಲಾ ಗ್ರೂಪ್ ಗಳಿಗೆ ಪೋಸ್ಟ್ ಮಾಡಬೇಕು. ಅದರಂತೆ ಸ್ಪರ್ಧೆಯು ಸೆಪ್ಟೆಂಬರ್ 12ನೇ ತಾರೀಕಿಗೆ ಆರಂಭಗೊಂಡಿತು.

ಮತ್ತೆ ನಡೆದದ್ದು ಪವಾಡ (miracle). ಬಳಗದ ಸದಸ್ಯರ ಗಾಯನ ಪ್ರತಿಭೆಯ ಅನಾವರಣ. ಯಾರ ನಿರೀಕ್ಷೆಗೂ ನಿಲುಕದ ರೀತಿಯಲ್ಲಿ ಸದಸ್ಯರು ತಮ್ಮ ತಮ್ಮ ಇಂಪಾದ ಗಾಯನದ ವಿಡಿಯೋ ಕಳುಹಿಸಿದರು. ಸಂಗೀತ ಪ್ರಿಯರಿಗೆ ರಸದೌತಣವಿತ್ತರು. ಆನಂದ ಬಳಗದ ಸುಮಾರು 900 ಕುಟುಂಬದವರು ಈ ಅವಿಸ್ಮರಣೀಯ ಕೂಟದಲ್ಲಿ ಪಾಲ್ಗೊಂಡು ಸಂಗೀತ ಲೋಕದಲ್ಲಿ ತಲ್ಲೀನರಾದರು.

ಒಂದರ ಹಿಂದೆ ಒಂದರ ಹಾಗೆ ನಿರಂತರವಾಗಿ 113 ಹಾಡುಗಳ ವಿಡಿಯೋಗಳು ಬಂದವು. ಸ್ಪರ್ಧೆಯ ಕೊನೆಯ ದಿನವಾದ ಭಾನುವಾರವಂತೂ ಗಾನಲೋಕವೇ ಶೃಷ್ಠಿಯಾಯಿತು. ಒಂದಕ್ಕಿಂತ ಒಂದು ಉತ್ತಮ ಅನ್ನುವ ಹಾಡುಗಳು, ಬಳಗದಲ್ಲಿ ಇಷ್ಟೊಂದು ಪ್ರತಿಭೆಗಳು!

ಕಾರ್ಯಕ್ರಮ ಆಯೋಜಿಸಿದ ಯುವ ಹಾಗೂ ಸಾಂಸ್ಕೃತಿಕ ವಿಭಾಗದವರಲ್ಲಿ ಕೃತಜ್ಞತೆಯ ಹಾಗೂ ಧನ್ಯತೆಯ ಮನೋಭಾವ. ತಮ್ಮ ಕನಸು ಸಾಕಾರಗೊಂಡ ಅನುಭವ‌.

ಪ್ರಾಯಶಃ ಇಷ್ಟೊಂದು ಉತ್ತಮ ಮಟ್ಟದ ಗಾಯನದ ನಿರೀಕ್ಷೆಯಲ್ಲಿರದ ನಮ್ಮ ತೀರ್ಪುಗಾರರಿಗೆ ಇದೊಂದು ಸವಾಲೆಂದು ಅನ್ನಿಸಿರಬಹುದು. . ಸವಾಲನ್ನು ಅಷ್ಟೇ ಚಾಣಾಕ್ಷತನದಿಂದ ಪರಿಹರಿಸಿ ಅತ್ಯಂತ ಸೂಕ್ತ ರೀತಿಯಲ್ಲಿ ಮೌಲ್ಯಮಾಪನ ಮಾಡಿ ತೀರ್ಪು ಕೊಟ್ಟ ನಮ್ಮ ತೀರ್ಪು ಗಾರರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳೂ ವಿಜೇತರೆ. ಆದರೂ ನಿಯಮಾವಳಿಯ ಪ್ರಕಾರ ವಿಜೇತರನ್ನು ಆಯ್ಕೆ ಮಾಡುವುದು ಸಂಪ್ರದಾಯ.

ಅದರಂತೆ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರು ಈ ಕೆಳಗಿನಂತಿದೆ.

ದೇವರ ನಾಮ :

ಮೊದಲನೇ ಬಹುಮಾನ:
ಶ್ರೀಮತಿ ವಿಂಧ್ಯಾ ಸುಭಾಸ್.

ಎರಡನೇ ಬಹುಮಾನ:
ಶ್ರೀಮತಿ ಸೌಜನ್ಯ. ಯಸ್

ಮೂರನೇ ಬಹುಮಾನ :
ಶ್ರೀಮತಿ ಸ್ಪೂರ್ತಿ ಆರ್ ಭಟ್

ಭಾವಗೀತೆ/ಜಾನಪದ:

ಮೊದಲನೇ ಬಹುಮಾನ
2 ಸಹ ವಿಜೇತರು

ಶ್ರೀಮತಿ ವಿಂಧ್ಯಾ ಸುಭಾಸ್
ಶ್ರೀ ತೇಜಸ್ ಅಡಿಗ

ಎರಡನೇ ಬಹುಮಾನ
ಶ್ರೀಮತಿ ಸ್ಪೂರ್ತಿ ಆರ್ ಭಟ್

ಮೂರನೇ ಬಹುಮಾನ :
ಶ್ರೀ ಸುದರ್ಶನ್ ಶಾಸ್ತ್ರಿ

ಚಲನ ಚಿತ್ರ ಹಾಡುಗಳು:

ಮೊದಲನೇ ಬಹುಮಾನ :
ಶ್ರೀ ತೇಜಸ್ ಅಡಿಗ

ಎರಡನೇ ಬಹುಮಾನ
2 ಸಹ ವಿಜೇತರು

ಶ್ರೀ ಶಶಿಧರ್ ಹೆಬ್ಬಾರ್
ಶ್ರೀಮತಿ ರಕ್ಷಾ ಎಮ್

ಮೂರನೇ ಬಹುಮಾನ :
2 ಸಹ ವಿಜೇತರು

ಶ್ರೀ ಶ್ರೀನಾಥ್ ರಾವ್ ಕೊರ್ಡ್ಕಲ್
ಶ್ರೀ ಶರತ್ ಬಲ್ಲಾಲ್

ಚಲನ ಚಿತ್ರ ಹಾಡುಗಳ ಯುಗಳ ಗೀತೆ ವಿಭಾಗದಲ್ಲಿ ಸ್ಪರ್ಧೆಗೆ ಬೇಕಾದ ಕನಿಷ್ಠ ಸಂಖ್ಯೆಯ ಸದಸ್ಯರು ಇಲ್ಲವಾದುದರಿಂದ ಹಾಗೂ ಹಾಡಿದ ಒಂದು ಹಾಡು ಯುಗಳ ಗೀತೆಯ ವ್ಯಾಪ್ತಿಯಲ್ಲಿ ಬರದೇ ಇರುವ ಕಾರಣ ಅದನ್ನು ಪರಿಗಣಿಸಲಿಲ್ಲ.

ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಸದಸ್ಯರಿಗೂ ಆನಂದ ಬಳಗದ ಕಾರ್ಯಕಾರಿ ಸಮಿತಿಯ ಅದ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಯುವ ವಿಭಾಗ ಹಾಗೂ ಸಾಂಸ್ಕೃತಿಕ ವಿಭಾಗದ ಸದಸ್ಯರಿಂದ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಅಭಿನಂದನೆಗಳು.

ಬಾಲಚಂದ್ರ ತೋಳ್ಪಾಡಿ.

Subscribe Newsletter

Get latest updates of News and Evens from Ananda Balaga