ಹೊಸವರುಷವನ್ನು ಎಲ್ಲರೂ ಹೊಸ ರೀತಿಯಲ್ಲಿ ಆಚರಿಸಬೇಕು ಎನ್ನುವ ಸಂಕಲ್ಪ ಮಾಡಿರುವ ನಮ್ಮ ಆನಂದ ಬಳಗದ ಯುವ ವಿಭಾಗದ ಸಂಚಾಲಕರಾದ ಶ್ರೀ ದಿನೇಶ್ ರಾವ್ ರವರ ನೇತೃತ್ವದಲ್ಲಿ ತಂಡದ ನುರಿತ ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಆಲಿಸಿ, ಸಂಗ್ರಹಿಸಿ ಸಂಯೋಜಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿರುತ್ತದೆ. ಅದರಂತೆಯೇ ಜನ ವಿಭಿನ್ನ ರೀತಿಯನ್ನು ಸ್ವಾಗತಿಸುತ್ತಾರೆ ಎನ್ನುವುದಕ್ಕೆ ಈ ಸಾರಿಯ ಕಾರ್ಯಕ್ರಮವೇ ಸಾಕ್ಷಿ.
ಕಳೆದ ಬಾರಿಯಂತೆಯೇ ಈ ಬಾರಿಯೂ ೭ನೇ ತಾರೀಖಿಗೆ ಆಚರಿಸಿರುವ ಈ ಆನಂದ ಮಿಲನವು ೨೦೧೭ರಂತೆಯೇ ೨೦೧೮ರ ಕಾರ್ಯಕ್ರಮವು ನೆರೆದಿರುವ ಸದಸ್ಯರ ಮನದಲ್ಲಿ ಹರ್ಷೋಲ್ಲಾಸಗಳು ಕಾಣುತ್ತಿದ್ದು ಎಲ್ಲರ ಮೆಚ್ಚುಗೆ ಹಾಗೂ ಮನ್ನಣೆಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
ವುಡ್ ಲ್ಯಾಂಡ್ಸ್ ಹೋಟೇಲಿನ ಗ್ರೀನ್ ಆರ್ಚ್ ಸಭಾಂಗಣದಲ್ಲಿ ಸರಿಯಾಗಿ ೪:೨೫ಕ್ಕೆ ಶ್ರೀಯುತ ಎಸ್. ಟಿ. ಆರ್ ಮಡಿ ಹಾಗೂ ಶ್ರೀಮತಿ ರತ್ನಕಲಾಮಡಿಯವರ ಅಭಯ ಹಸ್ತದಿಂದ ಟೇಪು ಕತ್ತರಿಸಿ ದೀಪ ಹಚ್ಚುವ ಮೂಲಕ ಆಹಾರ ಮೇಳವನ್ನು ಉದ್ಘಾಟಿಸಲಾಯಿತು. ಆಹಾರ ಮೇಳದಲ್ಲಿ ಶ್ರೀ ಯು.ವಿ. ಕ್ರಿಷ್ಣಮೂರ್ತಿ ಯವರ ಟೀ, ಕಾಫಿ, ಗೋಳಿಬಜೆ, ಮಿರ್ಚಿ, ಬೋಂಡ, ಶ್ರೀ ಶ್ರೀಶ ಬಲ್ಲಾಳ್ ರವರ ಉಪ್ಪಿಟ್ಟು, ಅವಲಕ್ಕಿ, ಬನ್ಸ್, ಶ್ರೀ ಕಾರಂತರವರು ಪಾನಿಪುರಿ, ಮಸಾಲಾ ಪುರಿ, ದಹಿ ಪುರಿ ಇತರೆ, ಶ್ರೀ ಭಾಸ್ಕರ್ ಭಟ್ರವರು ಕಡಬು ಮೊಸರು ವಡೆ, ಹಾಲುಬಾಯಿ, ಗೋಧಿ ಪಾಯಸ, ಪತ್ರೊಡೆ, ಶಾವಿಗೆ ಭಾತ್, ಶ್ರೀಮತಿ ಸೌಮ್ಯರವರು ಕೇಕ್, ಚಾಕೊಲೇಟ್. ಐ. ಟಿ.ಮಿಲನ್ ರವರ ಪುಸ್ತಕ ಮಳಿಗೆ ಪಾಪ್ ಕಾರ್ನ್, ಅಮಿತರವರ “ರಿಂಗ್ ಯುವರ್ ಲಕ್” ಜನರನ್ನು ಆಕರ್ಷಿಸುತ್ತಿತ್ತು,
ಎಲ್ಲಾ ತಿಂಡಿಗಳಿಗೂ ರೂ. ೧೦.೦೦ ರ ಚೀಟಿಗಳನ್ನು ಶ್ರೀ ಮಾಧವ ಉಪಾಧ್ಯ ಹಾಗೂ ಶ್ರೀ ಗುರುರಾಜ ಪೇಜಾವರ ರಿಂದ ಖರೀದಿಸಿ ತಿಂಡಿ ಮಳಿಗೆಗಗಳು ಕಾರ್ಯಕ್ರಮದ ಕಡೆಯಲ್ಲಿ ಖಾಲಿಯಾಗಿದ್ದು ಎಲ್ಲರಿಗೂ ತಿಳಿದ ವಿಪಾಗಿ ಸೇರಿ ರುಚಿಯಾದ ತಿಂಡಿಗಳನ್ನು ಸವಿಯುತ್ತಿದ್ದರು. ನಮ್ಮ ಕರಾವಳಿಯ ವಿಶೇಷ ತಿಂಡಿಗಳು ಕಾರ್ಯಕ್ರಮದ ಕಡೆಯಲ್ಲಿ ಖಾಲಿಯಾಗಿದ್ದು ಎಲ್ಲರಿಗೂ ತಿಳಿದ ವಿಷಯವೇ.
ಆಹಾರ ಮೇಳವು ಒಂದುಕಡೆ ನಡೆಯುತ್ತಿದ್ದರೆ ಇತ್ತ ಸಮಯ ೫; ೩೦ಕ್ಕೆ ಸರಿಯಾಗಿ ಯುವ ವಿಭಾಗದ ಸಂಚಾಲಕರಾದ ಶ್ರೀ ದಿನೇಶ್ ರಾವ್ ಅವರು ಭಾರತೀಯ ಖೇಲ್ ಖ್ಯಾತಿಯ ಐ.ಟಿ. ಮಿಲನ್ ನ ೧೫ ಸದಸ್ಯರನ್ನು ಸ್ವಾಗತಿಸಿದರು ಹಾಗೂ ನೂತನ ರೀತಿಯ ಆಟದ ಸವಿಯನ್ನು ಸವಿಯಲು ಬಂದಿರುವ ಸದಸ್ಯರನ್ನು ಸ್ವಾಗತಿಸಿದರು. ಶ್ರೀ ಎಂ.ಕೆ. ಪ್ರಸಾದರವರು ಸಭೆಗೆ ಐ.ಟಿ. ಮಿಲನ್ ನ ಸದಸ್ಯರನ್ನು ಪರಿಚಯಿಸಿದ ನಂತರ ನವೀನ್, ವಿಶಾಲ್, ವ್ಯಶಾಖ್, ರವರ ನೇತೃತ್ವದಲ್ಲಿ “ಭಾರತ್ ಮಾತಾಕಿ ಜೈ” ಎನ್ನುವ ಘೋಷಣೆಯೊಂದಿಗೆ ಎಲ್ಲರ ಗಮನವನ್ನು ಸೆಳೆದು ಎಲ್ಲಾ ಸದಸ್ಯರನ್ನು ಜೊತೆಗೆ ಸೇರಿಸಿದರು, ತದನಂತರ ವಯಸ್ಸಿನ ಪ್ರಕಾರ ೪ ಗುಂಪುಗಳನ್ನು ಮಾಡಿದರು ಚಿಕ್ಕಮಕ್ಕಳು, ೧೦ ರಿಂದ ೨೦ರ ಪ್ರಾಯದ ಮಕ್ಕಳು, ೨೦ – ೪೦ರ ತನಕದ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಹಾಗೂ ೪೦ರ ನಂತರದ ಹೆಂಗಸರಿಗೂ, ಗಂಡಸರಿಗೂ ಬೇರೆ ಬೇರೆಯಾಗಿ ವಿವಿಧ ರೀತಿಯ ಆಟೋಟಗಳನ್ನು ಗ್ರೀನ್ ಆರ್ಚ್ ನ ಮದ್ಯಭಾಗದಲ್ಲಿ ನಡೆಸಲಾಯಿತು, ಎರಡು ತಾಸುಗಳು ಸೇರಿದ ಸದಸ್ಯರೆಲ್ಲರಿಗೂ ಕಳೆದು ಹೋದುದೇ ತಿಳಿಯಲಿಲ್ಲ ಬಹಳ ಸಂತೋಷದಲ್ಲಿ ನಗುನಗುತ್ತಾ ನಲಿಯುತ್ತ ತಮ್ಮನ್ನು ತಾವೇ ಬಾಲ್ಯ ಲೋಕಕ್ಕೆ ಹೋದಂತೆ ತಿಳಿದು ಎಲ್ಲರೂ ಆಟವಾಡುತ್ತಿದ್ದರು ಇದನ್ನು ನೋಡಲು ಎರಡು ಬದಿಯಲ್ಲಿ ಕುರ್ಚಿಗಳ ವ್ಯವಸ್ಥೆ ಇದ್ದರೂ ಕುಳಿತವರ ಸಂಖ್ಯೆ ಅಷ್ಟಕಷ್ಟೇ ಇತ್ತು.
ಯಾವುದೇ ರೀತಿಯ ಸಂಭಾವನೆಯನ್ನು ಬಯಸದೆ, ಹೂ ಗುಚ್ಛಗಳನ್ನೂ ಬೇಡವೆಂದ ಈ ಐ. ಟಿ. ಮಿಲನ್ ಗ್ರೂಪಿನವರು ವಿವಿಧ ರೀತಿಯ ಭಾರತೀಯ ಖೇಲಿನ ಆಟಗಳನ್ನು ಆಡಿಸಿ ನಮ್ಮ ಸದಸ್ಯರ ಮನಗೆದ್ದ ಇವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ಸಮಯ ೭:೩೦ರ ನಂತರದ ವೇದಿಕೆಯ ಕಾರ್ಯಕ್ರಮವು ಕೆದಿಲಾಯ ಸೋದರ ಸೋದರಿಯರಾದ ಆದಿತ್ಯ ಹಾಗೂ ಮೇಘನಾ ಕೆದಿಲಾಯರವರ ಸುಮದುರ ಕಂಠದಲ್ಲಿ ಪ್ರಾಥನೆಯೊಂದಿಗೆ ಪ್ರಾರಂಭವಾಯಿತು.
ವಾಸ್ತವಲೋಕದಿಂದ ಮಾಯಾಲೋಕಕ್ಕೆ ಸದಸ್ಯರನ್ನು ಕರೆದೊಯ್ಯಲೆಂದೇ ಆಲೋಚಿಸಿ ಒಂದು ಬಾಹ್ಯ ಪ್ರಪಂಚದ ಕಾರ್ಯಕ್ರಮವನ್ನು ಶ್ರೀ ಆಕರ್ಷ್ ಭಟ್ ರವರ ಮೂಲಕ ಮಾಡಿಸಲಾಯಿತು. ಆಕರ್ಷ್ ಹೆಸರಿಗೆ ತಕ್ಕಂತೆ ಆಕರ್ಷಕವಾಗಿ ಸಾದಾರಣ ಅರ್ಧತಾಸಿಗಿಂತಲ್ಲೂ ಹೆಚ್ಚಾಗಿ ನಮ್ಮವರೆನ್ನೆಲ್ಲಾ ಭ್ರಮ ಲೋಕದಲ್ಲಿದ್ದ ಹಾಗೆ ಮೋಡಿ ಮಾಡಿರುವ ಆಕರ್ಷ್ ರವರ ಪರಿಚಯವನ್ನು ಶ್ರೀ ಸುಧಾಮ ರಾವ್ ಅವರು ಮಾಡಿದರು ಹಾಗೂ ದಿನೇಶ್ ರಾಯರು ಪುಷ್ಪ ಗುಚ್ಛ ನೀಡಿ ಸ್ವಾಗತಿಸಿದರು. ತದನಂತರ ನಮ್ಮ ಬಳಗದ ಸದಸ್ಯರಾದ ಶ್ರೀ ರಾಜೇಶ್ ರಾವ್ ಮತ್ತು ತಂಡದವರಿಂದ “ಅಯ್ಯೋ ದೇವರೇ” ಮೂಕಾಭಿನಯ, ಶ್ರೀ ದೇವರಾಜ ಕರಬ, ಶ್ರೀ ಅರವಿಂದ್ ಅಡಿಗ ಹಾಗೂ ಸೌಮ್ಯ ರವರಿಂದ ಹಾಸ್ಯ ಪ್ರಹಸನ, ಶ್ರೀ ಗೋಪಾಲಕೃಷ್ಣ ಕುಂಜತ್ತಾಯ ತಂಡದಿಂದ “ಹುಡುಕಾಟ” ಎಂಬ ಮೂಕ ಪಾತ್ರಾಭಿನಯವನ್ನು ಶ್ರೀ ಕೆ, ಏನ್, ಅಡಿಗ ರವರ ನಿರ್ದೇಶನದಲ್ಲಿ ಮಾಡಿ ತಮ್ಮೆಲರ ಅಭಿನಯದ ಸಾಮರ್ಥ್ಯವನ್ನು ನಮ್ಮ ಸದಸ್ಯರಿಗೆ ಮುಟ್ಟುವಂತೆ ಅಭಿನಯಿಸಿ ತೋರಿಸಿದರು.
ನಮ್ಮ ಬಳಗದ ಯುವ ಶಕ್ತಿಗಳಾದ ಶ್ರೀ ಆಶೀಶ್ ರಾವ್, ವಿನ್ಯಾಸ್, ಅಶ್ವಿನ್, ದೀಪಕ್ ರಾವ್ ಮತ್ತು ಶ್ರೀಕಾಂತ್ ಮಯ್ಯ ರವರು ನೃತ್ಯ ರೂಪದಲ್ಲಿ ಕನ್ನಡ ಹಾಗೂ ಹಿಂದಿ ಭಾಷೆಯ ಚಿತ್ರದ ಕೆಲವು ಹಾಡುಗಳಿಗೆ ಹಾಸ್ಯ ರೂಪದಲ್ಲಿ ನರ್ತಿಸಿ ಜನರ ಮನಸೂರೆ ಗೊಳಿಸಿದರು.
ಕಟ್ಟ ಕಡೆಯದಾಗಿ ದಕ್ಷಿಣ ಕನ್ನಡದ ಜನರ ಹುಬ್ಬೇರಿಸುವಂತಹ, ಉತ್ಸಾಹವನ್ನು ಉಕ್ಕೇರಿಸುವಂತಹ ನವರಾತ್ರಿಯ ಸಮಯದ ಜನಪ್ರಿಯ ನೃತ್ಯ ಹುಲಿ ಆಟ (ಪಿಲಿಗೊಬ್ಬು) ವನ್ನು ಶ್ರೀ ನಿಶ್ಚಲ್ ತೋಳ್ಪಾಡಿ ಹಾಗೂ ಶ್ರೀ ಬಾಲಚಂದ್ರ ತೋಳ್ಪಾಡಿ ತಂಡದವರು ಆಡಿ ತೋರಿಸಿದರು. ಇವರ ಈ ಪಿಲಿ ಗೊಬ್ಬಿಗೆ ಸರಿಸಾಟಿಯಾಗಿ ಸಭಿಕರಲ್ಲಿದ್ದ ಶ್ರೀಮತಿ ಮೀನಾ ಮಹಬಲೇಶ್ವರ್ ರವರು ಪುಳಕಿತ ಗೊಂಡು ತಾನೂ ನಟಿಸಿ, ಉಳಿದ ಸದಸ್ಯರನ್ನು ವೇದಿಕೆಗೆ ಕರೆ ತಂದು ನಮ್ಮ ಸದಸ್ಯರೆಲ್ಲರಲ್ಲೂ ನಟಿಸುವ ಸಾಮರ್ಥ್ಯವಿದೆ ಎಂದು ಸಭಿಕರಿಗೆ ತೋರಿಸಿಕೊಟ್ಟರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ ಶ್ರೀ ಗೋಪಾಲಕೃಷ್ಣ ಕುಂಜತ್ತಾಯರು ಎಲ್ಲರ ಮನ್ನಣೆ ಪಡೆದರು ಹಾಗೂ ವಂದನಾರ್ಪಣೆಯನ್ನು ಶ್ರೀ ರಾಜೇಶ್ ರಾವ್ ಅವರು ಸಲ್ಲಿಸಿದರು.
ಈ ಕಾರ್ಯಕ್ರಮದ ಈ ಬೀಟ್ ಗೆ, ನೃತ್ಯಕ್ಕೆ, ಶೈಲಿಗೆ ಹಾಗೂ ಮೋಡಿಗೆ ವಯಸ್ಸು, ಲಿಂಗ ಭೇದವಿಲ್ಲದೆ ಮನಸೋಲದ ಸದಸ್ಯರಿಲ್ಲ, ಇಂತಹ ಕಾರ್ಯಕ್ರಮವನ್ನು ನಮ್ಮ ಸದಸ್ಯರಿಗೆ ನೀಡಿದ ಯುವ ವಿಭಾಗದ ಸಂಚಾಲಕ ಶ್ರೀ ದಿನೇಶ್ ರಾಯರಿಗೂ ಹಾಗೂ ಅವರ ಉತ್ಸಾಹಿ ತಂಡದವರಿಗೂ ಆನಂದ ಬಳಗದ ಕಾರ್ಯಕಾರಿ ಸಮಿತಿಗೂ, ಆನಂದ ಮಿಲನದ ಯಶಸ್ಸಿಗೆ ಶಕ್ತಿ ಮೀರಿ ಶ್ರಮಿಸಿದ ಎಲ್ಲರಿಗೂ ಸೇರಿದ ಜನಸ್ತೋಮಾ ಅಭಿನಂದನೆಯನ್ನು ಸಲ್ಲಿಸಿದರು.
ಬರಹಗಾರರು
ಅಮಿತ .ಡಿ. ರಾವ್