ಅನಂದ ಬಳಗದ ಯುವವಿಭಾಗದ ನೇತೃತ್ವದಲ್ಲಿ ದಿನಾಂಕ 23.07.2017 ರ ಬಾನುವಾರದಂದು ಆಜಂತಾ ಹೋಟೇಲಿನ ಸಭಾಂಗಣದಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ (GST) ಯ ಕುರಿತ ಕಮ್ಮಟವು ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಸಫಲವಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ನಗರದ ಸುಪ್ರಸಿದ್ದ ಮೆI ವಿಷ್ಣು ದಯಾ ಸಂಸ್ಥೆಯ ಶ್ರೀಯುತ ದಯಾನಂದ ರವರು ಭಾಗವಹಿಸಿದ್ದರು.
ಶ್ರೀಯುತ ದಯಾನಂದ ರವರು ಇಂತಹ ಹಲವು ಕಾರ್ಯಕ್ರಮಗಳನ್ನು ವಿವಿಧೆಡೆಗಳಲ್ಲಿ ನಡೆಸಿ GST ಯ ಬಗ್ಗೆ ಅಧಿಕೃತ ವಾಗಿ ಮಾತನಾಡಬಲ್ಲ ಪರಿಣಿತರು. ಇವರನ್ನು ಹಾಗೂ ಭಾಗವಹಿಸಲು ಬಂದಿರುವ ಬಳಗದ ಸದಸ್ಯರನ್ನು
ಶ್ರೀ ಎಸ್. ಎನ್. ಶರತ್ ಚಂದ್ರ ರವರು ಸ್ವಾಗತಿಸಿದರು.
ಆರಂಭದಲ್ಲಿ GST ಯ ಹಿನ್ನೆಲೆ, ಅವಶ್ಯಕತೆ, ಉಪಯೋಗ ಹಾಗೂ ಆದರ ಸಾಧಕ ಭಾದಕಗಳ ಬಗ್ಗೆ ವಿವರಿಸಿದ
ಶ್ರೀ ದಯಾನಂದ ರವರು ಭಾಗವಿಸಿದ ವ್ಯಕ್ತಿಗಳ ಸಂಶಯ ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದರು. ವಿವಿಧ ಪ್ರಾಕಾರಗಳ ವಹಿವಾಟುಗಳಲ್ಲಿ ತೊಡಗಿಸಿ ಕೊಂಡಿರುವ ವ್ಯಕ್ತಿಗಳ ಸಮಸ್ಯೆಗಳಿಗೆ GSTಯ ಅನುಸಾರ ಅನುಸರಿಸ ಬೇಕಾದ ಮಾರ್ಗಗಳನ್ನು ತಿಳಿಸಿದರು. ಸರಿಯಾದ ರೀತಿಯಲ್ಲಿ ವ್ಯವಹರಿಸಲು ಹಾಗೂ ಅದಕ್ಕೆ ಸಂಬಧಿತ ಸಮಸ್ಯೆಗಳಲ್ಲಿ ಸಿಲುಕಿ ತೊಂದರೆಗೀಡಾಗದಿರಲು GSTಯ ಬಗ್ಗೆ ತಕ್ಕ ಮಟ್ಟಿನ ತಿಳುವಳಿಕೆಯ ಆವಶ್ಯಕತೆ ಇದೆ ಎಂದ ಶ್ರೀ ದಯಾನಂದ ರವರು ಪ್ರತಿಯೊಬ್ಬರು ತಮ್ಮ ವಹಿವಾಟಿನ ಬಗ್ಗೆ ಸಂಪೂರ್ಣಮಾಹಿತಿ ಹಾಗೂ ಕಾನೂನಿನ ಪ್ರಕಾರ ಪಾಲಿಸಬೇಕಾದ ನಿಯಮಗಳ ಬಗ್ಗೆ ಆತ್ಯಂತ ಸರಳವಾಗಿ ಹಾಗೂ ವಿವರವಾಗಿ ಕಮ್ಮಟದಲ್ಲಿ ಪಾಲ್ಗೊಂಡ ಆಭ್ಯರ್ಧಿಗಳಿಗೆ ತಿಳಿಸಿದರು.
ವ್ಯವಹಾರದಲ್ಲಿ ಪ್ರಾಮಾಣಿಕ ಪಾರದರ್ಶಕತೆ, ಸರಳೀಕರಣ ಹಾಗೂ ಕಾಳಸಂತೆಕೋರರ ನಿಗ್ರಹಗಳೇ ಈ ಕಾನೂನಿನ ಉದ್ದೇಶ ವಿನಹಾ ಪ್ರಾಮಾಣಿಕ ವಹಿವಾಟುದಾರರ ಶೋಷಣೆ ಗೋಸ್ಕರ ಆಲ್ಲ ಎಂಬ ವಿಚಾರವನ್ನು ನಾವು ಮನಗಾಣಬೇಕು ಎಂದು ತಿಳಿಸಿದರು.
ಸುಮಾರು ೪೦ಕ್ಕೂ ಆಧಿಕ ಆಸಕ್ತರು ಪಾಲ್ಗೊಂಡ ಈ ಕಾರ್ಯಕ್ರಮವು ಸಮಕಾಲೀನ ವಿಚಾರಗಳ ಬಗ್ಗೆ ಸದಸ್ಯರಿಗೆ ತಿಳಿ ಹೇಳುವ ಪ್ರಯತ್ನದತ್ತ ಆನಂದ ಬಳಗ ಮತ್ತು ಯುವ ವಿಭಾಗದವರಿಗೆ ಇರುವ ಕಾಳಜಿಯನ್ನು ತೋರಿಸಿತೆನ್ನಬಹುದು.
ಕಾರ್ಯಕ್ರಮದ ಆಂತ್ಯಭಾಗದಲ್ಲಿ ಆನಂದ ಬಳಗದ ಸದಸ್ಯರಾದ ಶ್ರೀ ಯು. ವಿ ಕೃಷ್ಣಮೂರ್ತಿ ಯವರು ಶ್ರೀ ದಯಾನಂದರವರಿಗೆ ಪುಷ್ಪಗುಚ್ಛ ಹಾಗೂ ಬಳಗದ ಉಪಾಧ್ಯಕ್ಷರಾದ ಶ್ರೀ ರಾಮಚಂದ್ರ ಉಪಾದ್ಯರವರು ನೆನಪಿನ ಕಾಣಿಕೆಯನ್ನಿತ್ತು ಗೌರವಿಸಿದರು.ಯುವವಿಭಾಗ ಸಂಚಾಲಕರಾದ ಶ್ರೀ ದಿನೇಶರವರು, ಶ್ರೀ ದಯಾನಂದ ಮತ್ತು ಆಗಮಿಸಿದ ಆಸಕ್ತರಿಗೆ, ಈ ಕಾರ್ಯಕ್ರಮವನ್ನು ನೆಡೆಸಲು ಸ್ಥಳಾವಕಾಶವನ್ನು ನೀಡಿದ ಆಜಂತಾ ಹೋಟೇಲಿನ ಮಾಲಿಕರಿಗೆ ಹಾಗೂ ಸಹಕರಿಸಿದ ಸಿಬ್ಬಂದಿಗಳಿಗೊ ವಂದನಾರ್ಪಣೆಯನ್ನು ನೀಡಿದರು. ಬಳಗದ ಸದಸ್ಯರು ಲೆಕ್ಕ ಪರಿಶೋದಕರೂ ಆದ ಶ್ರಿಯುತ ವೈ.ರಾದಾಕೃಷ್ಣ, ಎಸ್. ಎನ್. ಶರತ್ ಚಂದ್ರ ಮತ್ತು ಗೋಪಾಲಕೃಷ್ಣರವರು ಈ ಕೂಟದಲ್ಲಿ ಸಹಕರಿಸಿದರು.